ಶ್ರೀಮತಿ ಪುಷ್ಪಾಲತಾ ಪವಿತ್ರ ರಾಜ್ ರವರು ಸಂಸ್ಥಾಪಕ ರಾಜ್ಯದ್ಯಕ್ಷರು ತಮ್ಮ 23ನೇ ವಯಸ್ಸಿನಿಂದಲೇ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ರಾಜ್ಯದ್ಯಂತ ಸಾವಿರಾರು ಮಹಿಳೆಯರಿಗೆ ಸ್ವಯಂ ಕಲ್ಪವೃಕ್ಷ ಸ್ಪೂರ್ತಿಯಾಗಿ ಹೊಲಿಗೆ ತರಬೇತಿ ಶಿಬಿರಗಳನ್ನು ಆಯೋಜಿಸಿ ವಿವಿಧ ಕುಷಲಗಳ ಗ್ರಾಮೀಣ ಕೈ ಕಸಬುಗಳ ಜಾಗೃತಿ ಮೂಡಿಸಿ ಗ್ರಾಮೀಣ ಜನಜಾಗೃತಿಯ ಜೊತೆ ಕೃಷಿ ಮಹಿಳಾ ರೈತರಿಗೆ ಸ್ವಯಂಸೇವಾ ಗೃಹಕೆಲಸದ ಜೊತೆ ಹಣಗಳಿಕೆಗೆ ಸ್ಪೂರ್ತಿ ನೀಡುವ ಮತ್ತು ಸೂಕ್ತ ಸಲಹೆ ತರಬೇತಿಗಳನ್ನು ನೀಡಿ ಸ್ವಾವಲಂಬಿ ಜೀವನವನ್ನು ನಡೆಸಲು ಪ್ರೇರಕರಾಗಿದ್ದಾರೆ.
ನಿಷ್ಕಲ್ಮಶ ಸಮಾಜ ಸೇವಕರಾದ ಶ್ರೀಮತಿ ಡಾ.ಪುಷ್ಪಲತಾ ಅವರು "ವಿಚಾರಗಳು ಪ್ರಚಾರವಾಗಬೇಕು ಪ್ರಚಾರವೇ ವಿಚಾರವಲ್ಲ" ಎಂಬ ಸಿದ್ಧಾಂತ ನಂಬಿದವರು, ಬಾಲ್ಯದಿಂದಲೇ ದಾನ - ಧರ್ಮ - ದಯೆ - ಪರೋಪಕಾರಿ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಸರ್ವಜನಾಂಗದವರಿಗೆ ಬೇಕಾದವರು.
ಸಾಧನೆ ಮಾಡಬೇಕೆ ಹೊರತು ಮಾತನಾಡುವುದೇ ಸಾಧನೆಯಾಗಬಾರದು ಎಂಬ ನುಡಿ ಪಾಲಿಸಿದವರು, ಜನರೊಂದಿಗೆ ಸರಳವಾಗಿ ಬೆರೆತು ಜನಸಂಪರ್ಕದಲ್ಲಿ ಇದ್ದು ಜನ ಸೇವೆ ಮಾಡುತ್ತಾ ಸ್ತ್ರೀಶಕ್ತಿಯಾಗಿ ಸಮಾಜದಲ್ಲಿ ಹೊಸ ಛಾಪು ಮೂಡಿಸಿದವರು, ಅನಾಥ ಮಕ್ಕಳಿಗೆ ಆಶ್ರಯ ಹಿರಿಯ ನಾಗರಿಕರಿಗೆ ವೃದ್ರಶ್ರಮ ಸೇವೆಯ ಜೊತೆ ಸ್ವಾವಲಂಬಿ ಜೀವನಕ್ಕೆ ಆಶಾಕಿರಣರಾದವರು.
"ನಮಗಾಗಿ ನಾವು ಬಾಳುವುದು ಅಲ್ಪ ಕಾಲ ಇನ್ನೊಬ್ಬರಿಗಾಗಿ ಬಾಳುವುದು ಬಹುಕಾಲ ರಾಜ್ಯ ಮತ್ತು ರಾಷ್ಟ್ರ ಜನ ಕಲ್ಯಾಣ ಸೇವೆಗಾಗಿ ಬಾಳಿ ಬದುಕುವುದು ಚಿರಕಾಲ"
ಇದರ ಜೊತೆಗೆ ದಾವಣಗೆರೆ ಹೊರವಲಯದ ತುರ್ಚಘಟ್ಟ ಗ್ರಾಮ ಬುಳ್ಳಾಪುರ ಕ್ಯಾಂಪ್ನಲ್ಲಿ ಸಾಧನ ವೃದ್ರಾಶ್ರಮ ಮತ್ತು ಅನಾಥಾಶ್ರಮ, ಸುಮಾರು ಐದು ವರ್ಷಗಳ ಹಿಂದೆ ಆರಂಭಿಸಿ ನಿರಾಶ್ರಿತರು, ನಿರ್ಗತಿಕರು, ಕಾಯಿಲೆಯಿಂದ ಬಳಲುವರಿಗೆ ಉಚಿತವಾಗಿ ಆಶ್ರಯ ನೀಡಿ ಕೆಲಸ ನಿರ್ವಹಿಸುತ್ತಿದ್ದಾರೆ.
ಸರ್ಕಾರದ ಯಾವುದೇ ಅನುದಾನಗಳಿಲ್ಲದೆ ದಾನಿಗಳ ಸಹಕಾರದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮನೆಯಲ್ಲಿ ಕಡಿಗಣಿಸಿದ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಸಂಸ್ಥೆ ಊಟ - ವಸತಿ ಕೊಟ್ಟು ಸುಮಾರು ನೂರಾರು ಹೆಚ್ಚು ಜನರಿಗೆ ಆಶ್ರಯ ನೀಡುತ್ತಿದೆ. ಜೊತೆಗೆ ಮರಣ ಹೊಂದಿದ ಸುಮಾರು 25ಕ್ಕೂ ಹೆಚ್ಚು ಜನರನ್ನು, ದೂರ ಸಂಬಂಧಿಕರನ್ನು ಜೊತೆಗೆ ಇರಿಸಿಕೊಂಡು ಅಂತಿಮ ಸಂಸ್ಕಾರವನ್ನು ನೆರವೇರಿಸಿದ್ದಾರೆ.
ಇದು ದಾವಣಗೆರೆಯ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಿಗೂ ಮತ್ತು ಎಲ್ಲ ಸದಸ್ಯರಿಗೂ ತಿಳಿದಿರುವ ವಿಚಾರವಾಗಿದೆ.
ಈ ಸಮಾಜಿಕ ಕಾರ್ಯಗಳನ್ನು ಗುರುತಿಸಿ ಹತ್ತು-ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸುವೆ.
Mrs. Pushpalata Pavitra Raj, the founder of Rajyadyksha from the age of 23, was involved in the social field and organized sewing training camps for thousands of women across the state as a self-motivated inspiration. are motivational.
Dr. Pushpalatha, an impeccable social worker, believed in the theory that "ideas should be propagated, not the idea itself".
Those who obeyed the saying that speaking should not be achieved, those who simply mingled with the people and served people and made a new mark in the society as women power, those who hoped for a self-reliant life with shelter for orphans and elderly citizens.
"We live for ourselves for a short time, live for others for a long time, live for the welfare of the state and the nation, and live forever".