Help Line No. 9591 791 631

Social Work

ನಮ್ಮ ಸಂಸ್ಥೆಯು 5 ವರ್ಷಗಳಿಂದ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ, ಜಲಪ್ರಳಯದಿಂದ ನಿರಾಶ್ರಿತರಾದ ಕೊಡಗಿನ ಜನರಿಗೆ ಸುಮಾರು 3 ವಾಹನಗಳ ಮೂಲಕ ದವಸ-ಧಾನ್ಯ-ಬಟ್ಟೆ ಇನ್ನಿತರ ದಿನನಿತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು, ವಿವಿಧ ಅನಾಥಾಶ್ರಮಗಳಿಗೆ ಭೇಟಿ ನೀಡಿ ಮಕ್ಕಳಿಗೆ ಊಟ ಒದಗಿಸಲಾಯಿತು. ದುರ್ಬಲ ಹೆಣ್ಣು ಮಕ್ಕಳಿಗೆ ಮತ್ತು ಅನಾಥ ಮಕ್ಕಳಿಗೆ ಹಣಕಾಸಿನ ನೆರವು ಮತ್ತು ಬಟ್ಟೆಗಳನ್ನು ವಿತರಿಸಲಾಯಿತು, ಅರ್ಹ ಮಹಿಳೆಯರಿಗೆ ವಿವಿಧ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಕೊಡುವ ವ್ಯವಸ್ಥೆ ಮಾಡಲಾಯಿತು, ಮಹಿಳೆಯರಿಗೆ ಟೈಲರಿಂಗ್ ತರಬೇತಿ ನೀಡಲಾಗುತ್ತಿದೆ, ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಮಹಿಳೆಯರಿಗೆ ಆರ್ಥಿಕವಾಗಿ ಸದೃಢವಾಗಲು ವಿವಿಧ ಯೋಜನೆಗಳ ಮೂಲಕ ಮಾರ್ಗದರ್ಶನ ನೀಡುತ್ತಿದೆ.

ಗಾರ್ಮೆಂಟ್ ಫ್ಯಾಕ್ಟರಿ ಮುಖ್ಯಸ್ಥರೊಂದಿಗೆ ಮಹಿಳೆಯರಿಗೆ ಉದ್ಯೋಗದ ಬಗ್ಗೆ ಮಾಹಿತಿ ಪಡೆದು ಮಹಿಳೆಯರಿಗೆ ಉದ್ಯೋಗ ದೊರಕಿಸಿ ಕೊಡುವುದು, ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ದಾದಿಯರಿಗೆ ಅವರ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಲಾಯಿತು.

ವಿವಿಧ ಶಾಲೆಗಳಿಗೆ ಭೇಟಿ ನೀಡಿ ಅವರ ಕಲಿಕೆ ಮತ್ತು ತಂದೆ - ತಾಯಿಗಳಿಗೆ ಗುರುಗಳ ಸಂಬಂಧದ ಬಗ್ಗೆ ಮಕ್ಕಳಿಗೆ ಮುಂದಿನ ಉತ್ತಮ ಭವಿಷ್ಯದ ಬಗ್ಗೆ ಉಪನ್ಯಾಸವನ್ನು ನೀಡಲಾಗುತ್ತದೆ, ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪರಿಸರ ದಿನಾಚರಣೆಯನ್ನು ಆಚರಿಸುವ ಮೂಲಕ ಸಸಿಗಳನ್ನು ವಿತರಿಸಲಾಯಿತು.

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ದಾವಣಗೆರೆ ಮತ್ತು ಬೆಂಗಳೂರಿನ ಜಿಲ್ಲೆಯ ಮುಖಂಡರು ಆಹ್ವಾನಿಸಿ ಮಹಿಳಾ ಜಾಗೃತಿ ಕಾರ್ಯವನ್ನು ಆಚರಿಸಲಾಯಿತು.

ನಾಡಿನ ಹೆಸರಾಂತ ಪೊಲೀಸ ಅಧಿಕಾರಿ ರವಿ ಚೆನ್ನಣ್ಣನ್ ರವರನ್ನು ಭೇಟಿಯಾಗಿ ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಐ.ಎ.ಎಸ್ (ಐ.ಪಿ.ಎಸ್) ವಿದ್ಯಾರ್ಥಿಗಳಿಗೆ ಒಂದು ದಿನದ ಸೆಮಿನಾರ್ ನಡೆಸುವ ಬಗ್ಗೆ ಆಹ್ವಾನ ನೀಡಲಾಯಿತು.

ಬೆಂಕಿ ರಹಿತ ಅಡುಗೆ ಮಾಡುವ ಬಗ್ಗೆ ಪ್ರೋತ್ಸಾಹಿಸಲು ವಿದ್ಯಾರ್ಥಿ ಹಾಗೂ ಹೆಣ್ಣು ಮಕ್ಕಳಿಗೆ ಸ್ಪರ್ಧೆಯನ್ನು ಏರ್ಪಡಿಸಿ ಅವರಿಗೆ ಪ್ರೋತ್ಸಾಹಿಸಲಾಯಿತು, ಮತದಾನ ಮಾಡುವ ಬಗ್ಗೆ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು, ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರನ್ನು ಭೇಟಿಯಾಗಿ ಉದ್ಯೋಗದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧ್ಯಾನತೆ ನೀಡುವ ಸಲುವಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಸಲ್ಲಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಸಂಗೀತ ಹಾಗೂ ರಂಗೋಲಿ ಸ್ಪರ್ಧೆ ಏರ್ಪಡಿಸಿ ವಿಜಯದ ಪ್ರತಿಭಾವಂತರಿಗೆ ಬಹುಮಾನ ವಿತರಿಸಲಾಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ನಲ್ಲಿರುವ ವಿಕಲಚೇತನ ಮಕ್ಕಳಿಗೆ ಹಣ್ಣುಗಳನ್ನು ವಿತರಿಸಲಾಯಿತು. ವಿರಕ್ತಮಠದ ಶ್ರೀ ಶ್ರೀ ಶ್ರೀ ಬಸವಪ್ರಭು ಮಹಾಸ್ವಾಮಿಗಳವರಿಗೆ ಆವಾಹಾನಿಸಿ ದಾವಣಗೆರೆ ಮುಖ್ಯ ಕಚೇರಿಯಲ್ಲಿ ಟ್ರಸ್ಟ್ ಸದಸ್ಯರುಗಳಿಗೆ ಗುರುಗಳಿಂದ ಮಾರ್ಗದರ್ಶನ ಮತ್ತು ಆಶೀರ್ವಚನ ಕಾರ್ಯಕ್ರಮ ನಡೆಸಲಾಯಿತು. ಟ್ರಸ್ಟವತಿಯಿಂದ ವಿಕಲಚೇತನ ಮಕ್ಕಳಿಗೆ ಬ್ರೆಡ್ - ಬಿಸ್ಕೆಟ್ ಗಳನ್ನು ವಿತರಿಸಲಾಯಿತು.

Our organization has been doing social work for 5 years, distributing Grocery-clothes and other daily necessities through 3 vehicles to the people of Kodagu who were displaced by floods, visited various orphanages and provided food to children. Financial assistance and clothes were distributed to vulnerable girls and orphans, Arrangements were made to provide loan facilities to eligible women through various banks, training in tailoring to women, visiting various districts and guiding women through various schemes to make them financially strong.

Along with Garment Factory Heads, nurses were appreciated and congratulated for their work of getting information about employment for women and providing employment to women, visiting hospitals and providing excellent service to patients.

Visiting various schools and giving a lecture to the children about their learning and parent-teacher relationship for a better future, saplings were distributed by celebrating environment day in order to create awareness about the environment.

On the occasion of World Women's Day, women's awareness work was celebrated by inviting district leaders of Davangere and Bangalore.

Ravi Chennan, a renowned police officer of the country, was invited to conduct a one-day seminar for students studying in various classes and IAS (IPS) students.

A competition was organized for students and girls to encourage them to cook without fire, they were encouraged to vote, the public was made aware of voting, they met former Chief Minister Shri Yeddyurappa and appealed to the government to put pressure on the government to give more priority to women in employment.

In order to recognize and encourage talents in various fields, a music and rangoli competition was organized and prizes were distributed to the winning talents.

Fruits were distributed to physically challenged children in Anekal, Bangalore Rural District. Invoking Sri Sri Sri Basavaprabhu Mahaswami of Viraktamath, a guidance and blessing program was conducted for Trust members at Davangere head office. Bread - Biscuits were distributed to the differently abled children by the trustees.

SADHANA

OBJECTIVES

Sadhana Old Age Home & Orphanage

We live for ourselves for a short time, live for others for a long time, live for the welfare of the state and the nation, and live forever

Our Gallery

image
image
image
image
image
image